ಸುಂದರ್ ಸಿಂಗ್ ಭಂಡಾರಿ (೧೨ ಏಪ್ರಿಲ್ ೧೯೨೧ – ೨೨ ಜೂನ್ ೨೦೦೫) ಒಬ್ಬ ಭಾರತೀಯ ರಾಜಕಾರಣಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರು ಮತ್ತು ಭಾರತೀಯ ಜನಸಂಘ ಮತ್ತು ಭಾರತೀಯ ಜನತಾ ಪಕ್ಷಕ್ಕೆ ಸೇರಿದ ರಾಜಕಾರಣಿ. == ಆರಂಭಿಕ ಜೀವನ ಮತ್ತು ಶಿಕ್ಷಣ == ಇವರು ೧೯೨೧ ರಲ್ಲಿ ಉದಯಪುರದಲ್ಲಿ ಡಾ. ಸುಜನ್ ಸಿಂಗ್ಜಿ ಭಂಡಾರಿ ಮತ್ತು ಫುಲ್ಕನ್ವರ್ಬೈಜಿಯವರಿಗೆ ಜನಿಸಿದರು, ಅವರು ತಮ್ಮ ಶಾಲಾ ಶಿಕ್ಷಣವನ್ನು ಸಿರೋಹಿ ಮತ್ತು ಉದಯಪುರದಲ್ಲಿ. ಕಾಲೇಜು ಶಿಕ್ಷಣವನ್ನು ಕಾನ್ಪುರದಲ್ಲಿ ಪಡೆದರು. ಇವರು ೧೯೪೧ ರಲ್ಲಿ ಕಾನ್ಪುರದ ಎಸ್.ಡಿ ಕಾಲೇಜಿನಿಂದ ಕಾನೂನಿನಲ್ಲಿ ಪದವಿಯನ್ನು ಪಡೆದರು. ೧೯೪೨ ರಲ್ಲಿ ಕಾನ್ಪುರದ ದಯಾನಂದ ಆಂಗ್ಲೋ-ವೇದಿಕ್ ಕಾಲೇಜಿನಲ್ಲಿ ಮನೋವಿಜ್ಞಾನದೊಂದಿಗೆ ಕಲೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು == ವೃತ್ತಿ == ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ಗೆ ಸೇರುವ ಮೊದಲು ಅವರು ಮೇವಾರ್ ಹೈಕೋರ್ಟ್‌ನಲ್ಲಿ ಸ್ವಲ್ಪ ಸಮಯ ಕಾನೂನು ಅಭ್ಯಾಸ ಮಾಡಿದರು. ಆರ್‌ಎಸ್‌ಎಸ್‌ನಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇವರು ೧೯೫೧ ರಲ್ಲಿ ಸ್ಥಾಪಿಸಲಾದ ರಾಜಕೀಯ ಪಕ್ಷವಾದ ಜನಸಂಘದ ಸ್ಥಾಪಕ ಸದಸ್ಯರಾಗಿದ್ದರು. ಅವರು ಜನಸಂಘದಲ್ಲಿ ಮತ್ತು ನಂತರ ಬಿಜೆಪಿಯಲ್ಲಿ ವಿವಿಧ ಸಂಘಟನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ರಾಜ್ಯಪಾಲರಾಗುವ ಮುನ್ನ ಬಿಜೆಪಿಯ ಉಪಾಧ್ಯಕ್ಷರಾಗಿದ್ದರು. ಅವರು ೧೯೬೬-೧೯೭೨ ರ ಅವಧಿಯಲ್ಲಿ ರಾಜಸ್ಥಾನದಿಂದ ಮತ್ತು ೧೯೭೬ ರಲ್ಲಿ ಉತ್ತರ ಪ್ರದೇಶದಿಂದ ಮತ್ತು ೧೯೯೨ ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ೧೯೭೬ ರಲ್ಲಿ ಇಂದಿರಾಗಾಂಧಿ ಭಾರತದಲ್ಲಿ ಆಂತರಿಕ ತುರ್ತುಪರಿಸ್ಥಿತಿಯನ್ನು ಘೋಷಿಸಿದಾಗ ದೆಹಲಿ ರೈಲು ನಿಲ್ದಾಣದಲ್ಲಿ ಇವರನ್ನು ಬಂಧಿಸಲಾಯಿತು. ಇವರು ೨೭ ಏಪ್ರಿಲ್ ೧೯೯೮ ರಂದು ಬಿಹಾರದ ರಾಜ್ಯಪಾಲರಾಗಿ ನೇಮಕಗೊಂಡರು ಮತ್ತು ೧೫ ಮಾರ್ಚ್ ೧೯೯೯ ರವರೆಗೆ ಸೇವೆ ಸಲ್ಲಿಸಿದರು. ೧೮ ಮಾರ್ಚ್ ೧೯೯೯ ರಿಂದ ೬ ಮೇ ೨೦೦೩ ರವರೆಗೆ ಗುಜರಾತ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು ಇವರು ೨೨ ಜೂನ್ ೨೦೦೫ ರಂದು ನಿಧನರಾದರು == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಬಿಹಾರ ರಾಜ್ಯಪಾಲರು